Home

ಬಂಗಾರಪೇಟೆ ಪುರಸಭೆಯ ಬಗ್ಗೆ:

ಬಂಗಾರಪೇಟೆ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ತಾಲ್ಲೂಕು ಕೇಂದ್ರ.ಇದರ ಹಿಂದಿನ ಹೆಸರು ಮರಮೂಟ್ಲು ಎಂದಾಗಿದ್ದು ನಂತರ ಬೌರಿಂಗ್‌ಪೇಟೆ ಎಂದು ಬದಲಾಯಿಸಲಾಯಿತು.ಇದು ಆಂಧ್ರಪ್ರದೇಶ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಗಡಿಯನ್ನು ಹೊಂದಿದೆ.ಬಂಗಾರಪೇಟೆ ಪಟ್ಟಣವು ಬೆಂಗಳೂರಿನಿಂದ 80ಕಿ.ಮೀ ದೂರದಲ್ಲಿದೆ.

ಬಂಗಾರಪೇಟೆ ಪುರಸಭೆಯು 1920ರಲ್ಲಿ ಸ್ಥಾಪನೆಯಾಯಿತು.ನಗರದ ಜನಸಂಖ್ಯೆ 2011ರ ಸಮೀಕ್ಷೆಯಂತೆ 44,849. ನಗರದಲ್ಲಿ 23 ವಾರ್ಡುಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳಿರುತ್ತಾರೆ.ನಗರವು 5.50ಚ.ಕಿ.ಮೀ ವ್ಯಾಪಿಸಿದೆ.ನಗರದಲ್ಲಿ ಒಟ್ಟು 10083 ಕುಟುಂಬಗಳಿದ್ದು ನಗರದ ಸಾಕ್ಷರತಾ ಪ್ರಮಾಣ 2011ರ ಸಮೀಕ್ಷೆಯಂತೆ 76.76% ಆಗಿದೆ.

About Bangarpet TMC:

Bangarpet is a town in Kolar district in the Indian state of Karnataka.It was originally called Maramootlu before it changed to Bowringpet, named after an officer working in the Kolar Gold Fields.It is bordered by both Andhra Pradesh and Tamil Nadu.It is at a distance of 80 kms from Bangalore.

The Town Municipal Council(TMC) Bangarpet was constituted in 1920. It has a population of 44,849 according to the census of 2011. The TMC has 23 Wards and equal number of Councilors. Bangarpet TMC stretches to an area of 5.50 sq.kms.The total no of households in the town is 10083 and the literacy rate as per 2011 census is 76.76%.


ಪ್ಲಾಸ್ಟಿಕ್ ಬಳಕೆಯ ನಿಷೇಧ

ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸುವ ಉದ್ದೇಶದಿಂದ ಪುರಸಭೆ ವ್ಯಾಪ್ತಿಯಲ್ಲಿ ದಿನಾಂಕ:20-09-2011 ರಿಂದ ನಲವತ್ತು ಮೈಕ್ರಾನ್‌ಗಳಿಗಿಂತ ತೆಳುವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.

ಸಕಾಲ ಯೋಜನೆ

ನಾಗರೀಕರಿಗೆ ನಿಗದಿತ ಕಾಲಮಿತಿಯೊಳಗೆ ಸೇವೆಗಳನ್ನು ನೀಡುವ ಕರ್ನಾಟಕ ನಾಗರೀಕ ಸೇವಾ ಖಾತರಿ ಅಧಿನಿಯಮ, 2011 ಅಥವಾ ಸಕಾಲ ಯೋಜನೆಯನ್ನು ಏಪ್ರಿಲ್ 2, 2012 ರಿಂದ ಜಾರಿಗೊಳಿಸಲಾಗಿದೆ.

ಸರ್ಕಾರದ ಸೇವೆಯನ್ನು ಪಡೆಯಲು ಬಯಸುವ ಸಾರ್ವಜನಿಕರಿಗೆ ಆ ಸೇವೆಯನ್ನು ನಿಗದಿತ ಸಮಯದೊಳಗೆ ಪಡೆಯುವ ಅಧಿಕಾರವಿದೆ. ಸೇವೆಗಳನ್ನು ಪಡೆಯಲು ಅನವಶ್ಯಕ ವಿಳಂಬವಾದಲ್ಲಿ ಅನಗತ್ಯ ತೊಂದರೆಯನ್ನು ಎದುರಿಸಬೇಕಾದ ಸಾರ್ವಜನಿಕರಿಗೆ ಸಂಬಂಧಿತ ಸರ್ಕಾರಿ ನೌಕರರು ಪರಿಹಾರ ಧನವನ್ನು ಕೊಡಬೇಕಾಗಿ ಬರುವುದು ಈ ಕಾನೂನಿನ ವೈಶಿಷ್ಟ್ಯವಾಗಿದೆ.

ಸಾರ್ವಜನಿಕರ ಗಮನಕ್ಕಾಗಿ

ಶೌಚಾಲಯಗಳ ಪಿಟ್ ಸ್ವಚ್ಛತೆಯನ್ನು ಕೆಲಸಗಾರರು ತಮ್ಮ ಕೈಗಳಿಂದ ಸ್ವಚ್ಛಗೊಳಿಸುವುದು ಅಪರಾಧವಾಗಿರುತ್ತದೆ. ಸದರಿ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಹಾಗೂ ಕೆಲಸ ಮಾಡಿಸುತ್ತಿರುವ ಮಾಲೀಕನನ್ನು ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಶೌಚಾಲಯಗಳ ಪಿಟ್‌‌ಗಳನ್ನು ಪುರಸಭೆಯಲ್ಲಿ ಲಭ್ಯವಿರುವ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಗುವುದು. ಸಾರ್ವಜನಿಕರು ಸಕ್ಕಿಂಗ್ ಯಂತ್ರದ ಅವಶ್ಯಕತೆ ಇದ್ದಲ್ಲಿ ದೂರವಾಣಿ ಸಂಖ್ಯೆ:08153-253222 ಗೆ ಸಂಪರ್ಕಿಸಬಹುದು ಅಥವಾ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಘಟಕದಲ್ಲಿ ತಮ್ಮ ದೂರನ್ನು ದಾಖಲಿಸಬಹುದು.

ಮನೆಗಳು/ವಾಣಿಜ್ಯ ಮಳಿಗೆಗಳಲ್ಲಿ(ಬಾಡಿಗೆ ಅಥವಾ ಸ್ವಂತ) ಶೇಖರಣೆಯಾಗುವಂತಹ ತ್ಯಾಜ್ಯವನ್ನು (ಹಸಿ & ಒಣ ಕಸವನ್ನು ಪ್ರತ್ಯೇಕವಾಗಿ) ಮನೆ ಮನೆ ಕಸ ಸಂಗ್ರಹಣೆದಾರರಿಗೆ ಖಡ್ಡಾಯವಾಗಿ ನೀಡತಕ್ಕದ್ದು ಹಾಗೂ ನಿಗದಿಪಡಿಸಿದ ಮಾಸಿಕ ಸೇವಾ ಶುಲ್ಕವನ್ನು ಖಡ್ಡಾಯವಾಗಿ ಪಾವತಿಸಬೇಕು. ಈ ಕಾರ್ಯದಲ್ಲಿ ಸಹಕರಿಸದಿರುವ ಸಾರ್ವಜನಿಕರ ಮೇಲೆ ಕರ್ನಾಟಕ ಪೌರಸಭೆಗಳ ನಿಯಮದಂತೆ ದಂಡ ವಿಧಿಸಲಾಗುವುದು.

ಬಂಗಾರಪೇಟೆ ಪುರಸಭಾ ವ್ಯಾಪ್ತಿಯಲ್ಲಿನ ಎಲ್ಲಾ ಖಾತೆದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ನಿಮ್ಮ ಖಾಲಿ ಜಾಗಗಳಲ್ಲಿ ಮುಳ್ಳುಗಿಡಗಳು, ಪಾರ್ಥೇನಿಯಂ ಗಿಡಗಳು, ಕಸಕಡ್ಡಿ, ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯಗಳು ತುಂಬಿಕೊಂಡಿರುವುದರಿಂದ ವಿಷಭರಿತ ಕ್ರಿಮಿ-ಕೀಟಗಳು, ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗಿದೆ.ಆದ್ದರಿಂದ ನಿಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು & ಫೆನ್ಸಿಂಗ್ ಮಾಡಿಸಿಕೊಳ್ಳಲು ವಿನಂತಿಸಿದೆ. ತಪ್ಪಿದಲ್ಲಿ ಸೂಕ್ತಕ್ರಮ ತೆಗೆದುಕೊಳ್ಳಲಾಗುವುದು.

ಬಂಗಾರಪೇಟೆ ಪಟ್ಟಣದ ಎಲ್ಲಾ ಹಂದಿ ಸಾಕಾಣಿಕೆ ಮಾಡುತ್ತಿರುವ ಮಾಲೀಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಪಟ್ಟಣದಲ್ಲಿ ಹಂದಿ ಜ್ವರ(ಹೆಚ್‌‌1 ಎನ್‌‌1) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಮ್ಮ ಹಂದಿಗಳನ್ನು ನಗರದಿಂದ 3 ಕಿ.ಮೀ ಹೊರಗೆ ಸಾಗಿಸಲು ಸೂಚಿಸಿದೆ. ತಪ್ಪಿದಲ್ಲಿ ಪುರಸಭೆಗಳ ನಿಯಮಾವಳಿ ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಬಂಗಾರಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌‌ಗಳು & ಇನ್‌‌ಸ್ಯಾನಿಟರಿ ಲ್ಯಾಟ್ರಿನ್‌(ಅನೈರ್ಮಲ್ಯ ಶೌಚಾಲಯ)ಗಳ ಅಸ್ತಿತ್ವದ ಕುರಿತು ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌‌ಗಳಾಗಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ತಮ್ಮನ್ನು ಮ್ಯಾನ್ಯುಯಲ್ ಸ್ಕ್ಯಾವೆಂಜರ್‌‌ಗಳೆಂದು ಘೋಷಿಸಿ ಪುರಸಭಾ ಕಚೇರಿಯಲ್ಲಿ ದಾಖಲಿಸಬಹುದಾಗಿರುತ್ತದೆ.

ಪಟ್ಟಣದಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ಪ್ರತಿಯೊಬ್ಬರು ತಮ್ಮ ಮನೆಯ & ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಈ ಮೂಲಕ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಸ್ವರ್ಣ ಜಯಂತಿ ಶಹರಿ ರೋಜ್‌‌ಗಾರ್ ಯೋಜನೆಯಡಿಯಲ್ಲಿ ಬಂಗಾರಪೇಟೆ ಪಟ್ಟಣದಲ್ಲಿನ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಪುರಸಭಾ ಕಚೇರಿಯಲ್ಲಿ ಅರ್ಜಿಯನ್ನು ಪಡೆದು ಸಲ್ಲಿಸಬಹುದಾಗಿದೆ.

This Page is maintained by Chief Officer ¦ Last updated on:25-03-2015

No. Of Visitors :
Last Updated   : 25/01/2016  Release History
Release 2.0.0, Powered By Karnataka Municipal Data Society & maintained by Bangarpet TMC
This website can best viewed with the resolution 1024 * 768 using Internet Explorer 7.0 or above.
Valid CSS!