Home

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011

ಬಂಗಾರಪೇಟೆ ಪುರಸಭೆಯ ಬಗ್ಗೆ:

ಬಂಗಾರಪೇಟೆ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ತಾಲ್ಲೂಕು ಕೇಂದ್ರ.ಇದರ ಹಿಂದಿನ ಹೆಸರು ಮರಮೂಟ್ಲು ಎಂದಾಗಿದ್ದು ನಂತರ ಬೌರಿಂಗ್‌ಪೇಟೆ ಎಂದು ಬದಲಾಯಿಸಲಾಯಿತು.ಇದು ಆಂಧ್ರಪ್ರದೇಶ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಗಡಿಯನ್ನು ಹೊಂದಿದೆ.ಬಂಗಾರಪೇಟೆ ಪಟ್ಟಣವು ಬೆಂಗಳೂರಿನಿಂದ 80ಕಿ.ಮೀ ದೂರದಲ್ಲಿದೆ.

ಬಂಗಾರಪೇಟೆ ಪುರಸಭೆಯು 1920ರಲ್ಲಿ ಸ್ಥಾಪನೆಯಾಯಿತು.ನಗರದ ಜನಸಂಖ್ಯೆ 2001ರ ಸಮೀಕ್ಷೆಯಂತೆ 38,703.ನಗರದಲ್ಲಿ 23 ವಾರ್ಡುಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳಿರುತ್ತಾರೆ.ನಗರವು 5.50ಚ.ಕಿ.ಮೀ ವ್ಯಾಪಿಸಿದೆ.ನಗರದಲ್ಲಿ ಒಟ್ಟು 8615 ಮನೆಗಳಿದ್ದು ನಗರದ ಸಾಕ್ಷರತಾ ಪ್ರಮಾಣ 2001ರ ಸಮೀಕ್ಷೆಯಂತೆ 71.65% ಆಗಿದೆ.ನಗರದಲ್ಲಿ ಒಟ್ಟು 5 ಕೊಳಚೆಪ್ರದೇಶಗಳಿದ್ದು ಅವುಗಳಲ್ಲಿ 3 ಗುರುತಿಸಲ್ಪಟ್ಟ ಮತ್ತು 2 ಗುರುತಿಸಲ್ಪಡದೇ ಇರುವ ಕೊಳಚೆ ಪ್ರದೇಶಗಳಿವೆ.

About Bangarpet TMC:

Bangarpet is a town in Kolar district in the Indian state of Karnataka.It was originally called Maramootlu before it changed to Bowringpet, named after an officer working in the Kolar Gold Fields.It is bordered by both Andhra Pradesh and Tamil Nadu.It is at a distance of 80 kms from Bangalore.

The Town Municipal Council(TMC) Bangarpet was constituted in 1920. It has a population of 38,703 according to the census of 2001. The TMC has 23 Wards and equal number of Councilors. Bangarpet TMC stretches to an area of 5.50 sq.kms.The total no of households in the town is 8615 and the literacy rate as per 2001 census is 71.65%.The town has 5 slums; 3 declared and 2 undeclared.


ಪ್ಲಾಸ್ಟಿಕ್ ಬಳಕೆಯ ನಿಷೇಧ

ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸುವ ಉದ್ದೇಶದಿಂದ ಪುರಸಭೆ ವ್ಯಾಪ್ತಿಯಲ್ಲಿ ದಿನಾಂಕ:20-09-2011 ರಿಂದ ನಲವತ್ತು ಮೈಕ್ರಾನ್‌ಗಳಿಗಿಂತ ತೆಳುವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರ ಗಮನಕ್ಕಾಗಿ

ಶೌಚಾಲಯಗಳ ಪಿಟ್ ಸ್ವಚ್ಛತೆಯನ್ನು ಕೆಲಸಗಾರರು ತಮ್ಮ ಕೈಗಳಿಂದ ಸ್ವಚ್ಛಗೊಳಿಸುವುದು ಅಪರಾಧವಾಗಿರುತ್ತದೆ. ಸದರಿ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಹಾಗೂ ಕೆಲಸ ಮಾಡಿಸುತ್ತಿರುವ ಮಾಲೀಕನನ್ನು ಕಾನೂನು ರೀತ್ಯಾ ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಶೌಚಾಲಯಗಳ ಪಿಟ್‌‌ಗಳನ್ನು ಪುರಸಭೆಯಲ್ಲಿ ಲಭ್ಯವಿರುವ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಗುವುದು. ಸಾರ್ವಜನಿಕರು ಸಕ್ಕಿಂಗ್ ಯಂತ್ರದ ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:08153-255221/253222.

ಬಹಿರಂಗ ಹರಾಜು

ದಿನಾಂಕ: 29-02-2012ರಂದು ಬುಧವಾರ ಬೆಳಿಗ್ಗೆ 11.00ಗಂಟೆಗೆ ಪುರಸಭಾ ಕಚೇರಿಯ ಸಭಾಂಗಣದಲ್ಲಿ ವಿವಿಧ ಬಾಬುಗಳ ಬಹಿರಂಗ ಹರಾಜು ಮಾಡಲಾಗುವುದು. ಸಾರ್ವಜನಿಕರು ಪ್ರತಿಯೊಂದು ಬಾಬುಗಳಿಗೆ ನಿಗದಿಪಡಿಸಿರುವ ಠೇವಣಿಯನ್ನು ಪಾವತಿಸಿ ಹರಾಜಿನಲ್ಲಿ ಭಾಗವಹಿಸಬಹುದು.

ಸಕಾಲ ಯೋಜನೆ

ನಾಗರೀಕರಿಗೆ ನಿಗದಿತ ಕಾಲಮಿತಿಯೊಳಗೆ ಸೇವೆಗಳನ್ನು ನೀಡುವ ಕರ್ನಾಟಕ ನಾಗರೀಕ ಸೇವಾ ಖಾತರಿ ಅಧಿನಿಯಮ, 2011 ಅಥವಾ ಸಕಾಲ ಯೋಜನೆಯನ್ನು ಏಪ್ರಿಲ್ 2 ರಿಂದ ಜಾರಿಗೊಳಿಸಲಾಗಿದೆ.

This Page is maintained by Chief Officer   ¦  Last updated on:02-04-2012

No. Of Visitors :
Last Updated   : 18/05/2012  Release History
Release 2.0.0, Powered By Karnataka Municipal Data Society & maintained by Bangarpet TMC
This website can best viewed with the resolution 1024 * 768 using Internet Explorer 7.0 or above.
Valid CSS!